ನೀನಿಲ್ಲದೆ

ಇನಿಯ ನೀನಿಲ್ಲದ ಮನೆಯಲ್ಲಿ
ಏಳು ಹೆಜ್ಜೆಯನಿಟ್ಟು ಅಡಿಯಿರಿಸಿದ ನನ್ನ
ಏಕಾಂಗಿ ಹೆಜ್ಜೆ ತಡವರಿಸುತಿದೆ
ಆಳ ಪ್ರಪಾತದಲಿ ಬೀಳುವ ಭಯ ತುಂಬಿದೆ

ಬಿಸಿಉಸಿರ ಗಾಳಿ  ಅಪ್ಪಳಿಸಿ
ಜೀವ ತೇಯುತಿದೆ ನೋಯುತಿದೆ

ಜೊತೆಗಾರ ನೀನಿಲ್ಲದ ಮನೆಯಲ್ಲಿ
ಮಂದಹಾಸ ಮರೆಯಾಗಿದೆ
ಭಯದ ಅಭಾಸ ತಲೆದೋರಿದೆ
ಭೀತಿ ನಡುಕಗಳ ದ್ವಂದದಲಿ
ನನ್ನದಲ್ಲದ ನನ್ನ ಉಸಿರುಕಟ್ಟುತಿದೆ

ರಾತ್ರಿ ಕನವರಿಸುತಿದೆ
ನಿದ್ದೆ ಮರೆಯಾಗಿದೆ
ಕಣ್ಣೀರಾ  ಧಾರೆ
ಹುಡುಕುತಿದೆ ಕಳೆದ ದಿನಗಳನು
ನೀನಿಲ್ಲದ ಮನೆಯಲ್ಲಿ ಕನಸುಗಳು ಕರಗುತಿವೆ
ಆಶೆಗಳು ಉರಿಯುತಿವೆ

ಬಟ್ಟಬಯಲಿನಲಿ ಒಂಟಿಯಾಗಿ ಬಿಟ್ಟು
ನೀನೆಲ್ಲಿ ಹೋದೆ?

ನಿಮ್ಮ ಟಿಪ್ಪಣಿ ಬರೆಯಿರಿ